Wednesday, 8 February 2017

ಕುಟ್ಯಾಡಿ ಸಿರಾಜುಲ್ ಹುದಾ ಸಿಲ್ವರ್ ಜ್ಯುಬಿಲಿ ಸಮ್ಮೇಳನಕ್ಕೆ ಉಳ್ಳಾಲದಿಂದ ಹೊರಟ ಯಾತ್ರೆಯ ಅನುಭವ.


ಉಳ್ಳಾಲದ ಎಸ್ಸೆಸ್ಸೆಫ್, ಎಸ್ ವೈ ಎಸ್, ಸಯ್ಯಿದ್ ಮದನಿ ಸುನ್ನೀ ಸೆಂಟ್ರಲ್ ಕಮಿಟಿ ಇದರ ಕಾರ್ಯಕರ್ತರು ಸೇರಿ ಸಿರಾಜುಲ್ ಹುದಾ ಸಿಲ್ವರ್ ಜ್ಯುಬಿಲಿ ಸಮ್ಮೇಳನಕ್ಕೆ ಫೆಬ್ರವರಿ ನಾಲ್ಕು ಶನಿವಾರ ಸುಬಹ್ ನಮಾಜು ಮುಗಿದು ಉಳ್ಳಾಲ ಸಯ್ಯಿದ್ ಮದನಿ ಖ.ಸಿ ದರ್ಗಾ ಶರೀಫ್ ಝಿಯಾರತ್ ನೊಂದಿಗೆ ಕೇರಳದ ವಿವಿಧ ಅಲ್ಲಾಹನ ಇಷ್ಟದಾಸರುಗಳ ಮಖಾಂ ಝಿಯಾರತ್ ನಡೆಸುವ ಮೂಲಕ ಹೋದೆವು.
ಉಳ್ಳಾಲದ ವಿವಿಧ ಮೊಹಲ್ಲಾಗಳ ಕಾರ್ಯಕರ್ತರು ಸಯ್ಯಿದ್ ಮದನಿ ಖ.ಸಿ ದರ್ಗಾ ಶರೀಫ್ ಝಿಯಾರತ್ ನಡೆಸಿ ತಲಪಾಡಿ ಬಂದು ಸೇರಿ ತಲಪಾಡಿಯಿಂದ ನಾವು ಪ್ರಥಮವಾಗಿ ಯಾತ್ರೆ ಹೊರಟಿದ್ದು ಪೋಸೊಟು ತಂಗಳ್ ಖ.ಸಿ ಮಖಾಮಿಗೆ.ಅಲ್ಲಿ ಝಿಯಾರತ್ ನಡೆಸಿದ ಬಳಿಕ ಮಾಲಿಕುಬ್ನು ದೀನಾರ್ ರ.ಅ ರವರ ಮಖಾಂ ಝಿಯಾರತ್ ನಡೆಸಿದೆವು.ನಮ್ಮ ಯಾತ್ರೆಯ ಅಮೀರಾಗಿ ಸಯ್ಯಿದ್ ಮದನಿ ಸುನ್ನೀ ಸೆಂಟ್ರಲ್ ಕಮಿಟಿ ಇದರ ಅಧ್ಯಕ್ಷರು ಹಾಗು ಅನಸ್ ಝಿಯಾರತ್ ಟೂರ್ಸ್ ಅಮೀರಾದ ಅಬೂ ಅನಸ್ ಜಮಾಲ್ ಉಸ್ತಾದ್ ರವರು ಕರ್ತವ್ಯ ನಿರ್ವಹಿಸಿದ್ದರು.ಮಾಲಿಕುಬ್ನು ದೀನಾರ್ ರ.ಅ ಸೇರಿ ಹನ್ನೆರಡು ಸ್ವಹಾಬಿಗಳು ಕೇರಳಕ್ಕೆ ಬಂದು ಇಸ್ಲಾಂ ಪ್ರಚುರ ಪಡಿಸಿದ ವಿಷಯವನ್ನು ಜಮಾಲ್ ಉಸ್ತಾದ್ ತಿಳಿಸಿದರು.ಪ್ರಥಮವಾಗಿ ಈ ಹನ್ನೆರಡು ಸ್ವಹಾಬಿಗಳಿಗೆ ಕೇರಳದ ಅಪ್ಪು ಎಂಬ ದಲಿತ ಸಹೋದರನ ಪರಿಚಯವಾಗುತ್ತದೆ.ಅಪ್ಪು ಎಂಬ ದಲಿತ ಸಹೋದರನೊಂದಿಗೆ ಒಟ್ಟಿಗೆ ಕುಳಿತು ನಗು ಮುಖದೊಂದಿಗೆ ಇಸ್ಲಾಮಿನ ಸುಂದರ ಆಶಯಾದರ್ಶವನ್ನು ತಿಳಿಸುತ್ತಾರೆ.ಬಂದ ಅತಿಥಿಗಳಿಗೆ ಅಪ್ಪು ಕುಡಿಯಲು ಎಳನೀರನ್ನು ಕೊಡುತ್ತಾನೆ.ಎಲ್ಲರೂ ಸ್ವೀಕರಿಸುತ್ತಾರೆ.ಅಪ್ಪುವಿಗೆ ಅದ್ಭುತ...ನಾವು ದಲಿತರು,ನಮ್ಮೊಂದಿಗೆ ನಮ್ಮ ವರ್ಗದ ಮೇಲ್ಜಾತಿಯವರು ಮಾತನಾಡುವುದಿಲ್ಲ.ನಾವು ಮುಟ್ಟಿದ ನಾವು ತಿಂದ ನಾವು ಕುಡಿದ ಪಾತ್ರೆಯನ್ನು ಅವರು ಮುಟ್ಟುವುದಿಲ್ಲ.ಆದರೆ ಈ ಬಂದ ಹನ್ನೆರಡು ಅತಿಥಿಗಳು ಎಷ್ಟೊಂದು ಉತ್ತಮ ರೀತಿಯಲ್ಲಿ ನಮ್ಮೊಂದಿಗೆ ಇದ್ದಾರೆ.ಅಪ್ಪು ಈ ಸಂಗತಿಯನ್ನು ಅತಿಥಿಗಳಲ್ಲಿ ಹೇಳಿದ.ಅತಿಥಿಗಳಾದ ಸ್ವಹಾಬಿಗಳು ಹೇಳಿದರು : ಇಸ್ಲಾಮಿನಲ್ಲಿ ಭೇದಭಾವವಿಲ್ಲ.ತಾರತಮ್ಯವಿಲ್ಲ.ಮೇಲು ಕೀಳು ಎಂಬುದಿಲ್ಲ.ಅಪ್ಪುವಿನ ಮನಃ ಪರಿವರ್ತನೆಯಾಯಿತು.ಇಸ್ಲಾಮಿನ ಸುಂದರ ಆಶಯಗಳು, ಇವರ ಸ್ವಭಾವ ಗುಣಗಳಲ್ಲಿ ಆಕರ್ಷಿತನಾಗಿ ಇಸ್ಲಾಂ ಧರ್ಮ ಸ್ವೀಕರಿಸಿದನು.ಮತ್ತೆ ತನ್ನ ಪತ್ನಿಯೂ ಇಸ್ಲಾಂ ಧರ್ಮ ಸ್ವೀಕರಿಸಿದಳು.
ನಮ್ಮ ಯಾತ್ರೆ ಮುಂದುವರಿಯುತ್ತಿತ್ತು.ಸಹದಿಯ್ಯ ನೂರುಲ್ ಉಲಮಾ ಖ.ಸಿ ಮಖಾಂ ಝಿಯಾರತ್ ನಡೆಸಿದೆವು.ಅಲ್ಲಿಂದ ತಾಜುಲ್ ಉಲಮಾ ಖ.ಸಿ ರವರ ಪ್ರಧಾನ ಶಿಷ್ಯರಲ್ಲೋರ್ವರಾದ ಚೆರ್ವತ್ತೂರ್ ಸಜಿಪ ಉಸ್ತಾದ್ ರವರ ಮಖಾಂ ಝಿಯಾರತ್ ನಡೆಸಿದೆವು.ಅಮುಸ್ಲಿಮರಾಗಿ ಹುಟ್ಟಿದ ಸಜಿಪ ಉಸ್ತಾದ್ ರವರು ತನ್ನ ಹನ್ನೆರಡನೇ ವಯಸ್ಸಿನಲ್ಲಿ ಇಸ್ಲಾಂ ಧರ್ಮ ಸ್ವೀಕರಿಸಿದ್ದರು.ತಾಜುಲ್ ಉಲಮಾ ಖ.ಸಿ ರವರ ಪ್ರಧಾನ ಶಿಷ್ಯರಲ್ಲೋರ್ವರಾಗಿ ಅಲ್ಲಾಹನ ಇಷ್ಟದಾಸರುಗಳ ಸಾಲಿಗೆ ಸೇರಿದ ಮಹಾನರಾಗಿದ್ದಾರೆ.ಅವರ ಜೀವನ ಕಾಲದಲ್ಲೂ ನಂತರವೂ ಹಲವು ಅದ್ಭುತ ಘಟನೆಗಳು ನಡೆದಿದೆ.
ಸಾಮಾನ್ಯವಾಗಿ ತಾನು ದರ್ಸ್ ನಡೆಸುತ್ತಿದ್ದ ಸ್ಥಳದಿಂದ ನಿರ್ದಿಷ್ಟ ದಿನಗಳಲ್ಲಿ ಮಾತ್ರ ಊರಿಗೆ ಹೋಗುತ್ತಿದ್ದ ಸಜಿಪ ಉಸ್ತಾದರು ಒಂದು ದಿನ ದರ್ಸ್ ನಡೆಸುತ್ತಿರುವುದರ ಮಧ್ಯೆ ತಟ್ಟನೆ ಎದ್ದು ನಿಂತು ಊರಿಗೆ ಹೋಗಲು ಬೇಗ ಬೇಗ ರೆಡಿಯಾದರು.ಸಾಮಾನ್ಯವಾಗಿ ಊರಿಗೆ ಹೋಗುವ ದಿವಸ ಅಲ್ಲವಾದುದರಿಂದ ಮಸೀದಿ ಸಮಿತಿ ಸದಸ್ಯರೊಬ್ಬರು ಕೇಳಿದರು.ಉಸ್ತಾದ್ ರವರೇ..ತಾವು ಎಲ್ಲಿ ಹೋಗುತ್ತಿದ್ದೀರಿ.ತಾವು ಊರಿಗೆ ಹೋಗುವ ದಿವಸ ಅಲ್ವಲ್ಲಾ..ಉಸ್ತಾದ್ ಹೇಳಿದರು : ನಾನು ಈಗಲೇ ಊರಿಗೆ ಹೋಗಬೇಕು.ನನ್ನ ಪ್ರಿಯ ಪತ್ನಿಗೆ ಹಸುವೊಂದು ಗುದ್ದಿ ಬಿದ್ದು ಬಿಟ್ಟಿದ್ದಾಳೆ.ಅವಳನ್ನು ಮೇಲೆ ಎತ್ತಲು,ಅವಳನ್ನು ಉಪಚರಿಸಲು ಅಲ್ಲಿ ಬೇರೆ ಯಾರೂ ಇಲ್ಲ.ಅಂತೆಯೇ ಉಸ್ತಾದ್ ಊರಿಗೆ ಹೋದರು.ಪತ್ನಿ ಹಸು ಗುದ್ದಿ ಬಿದ್ದು ಬಿಟ್ಟಿದ್ದರು..ಅಲ್ಲಾಹನ ಇಷ್ಟದಾಸರಾದ ಸಜಿಪ ಉಸ್ತಾದ್ ರವರಿಗೆ ತನ್ನ ಪತ್ನಿ ಹಸುವೊಂದು ಗುದ್ದಿ ಬಿದ್ದು ಸಹಾಯಕ್ಕಾಗಿ ಮೊರೆಯಿಡುತ್ತಿದ್ದ ದ್ರಶ್ಯ ತಾನು ದರ್ಸ್ ನಡೆಸುತ್ತಿದ್ದ ಸ್ಥಳದಿಂದ ಕರಾಮತಿನ ಮುಖಾಂತರ ನೇರವಾಗಿ ಕಂಡರು.
ಬಳಿಕ ನಮ್ಮ ಪಯಣ ನಮ್ಮ ಆತ್ಮೀಯ ಗುರು ತಾಜುಲ್ ಉಲಮಾ ಖ.ಸಿ ರವರ ಎಟ್ಟಿಕುಳಮ್ಮಿಗಾಗಿತ್ತು.ಕಣ್ಮರೆಯಾದರೂ ಮನ್ಮರೆಯಾಗದ ತಾಜುಲ್ ಉಲಮಾ ಖ.ಸಿ...ತಾಜುಲ್ ಉಲಮಾ ಖ.ಸಿ ಇಲ್ಲದೆ ವರುಷಗಳು ಉರುಳುತ್ತಿದೆ.ತಾವಿಲ್ಲದ ಉಳ್ಳಾಲ ತುಂಬಾ ದುಃಖವಾಗುತ್ತಿದೆ.ಸುನ್ನತ್ ಜಮಾಅತಿನ ಅದ್ಭುತ ನಾಯಕತ್ವ.. ಯಾತ್ರೆಯಲ್ಲಿದ್ದ ಪ್ರತಿಯೊಬ್ಬರೂ ತಾಜುಲ್ ಉಲಮಾ ಖ.ಸಿ ರೊಂದಿಗಿನ ಅನುಭವವನ್ನು ತಿಳಿಸಿದರು..ಅದರಲ್ಲೊಂದು ಕರಾಮತನ್ನು ತಿಳಿಸುತ್ತಿದ್ದೇನೆ..ಉಳ್ಳಾಲ ಮುಕ್ಕಚ್ಚೇರಿಯಲ್ಲಿ ಮುದುಗುಡ ಸಖಾಫಿ ಮುದರ್ರಿಸ್ ಆಗಿದ್ದಂತಹ ಸಂದರ್ಭ..ನಮ್ಮ ಯಾತ್ರೆಯ ಅಮೀರ್ ಜಮಾಲ್ ಉಸ್ತಾದರು ಮುಕ್ಕಚ್ಚೇರಿಯಲ್ಲಿ ಮುದುಗುಡ ಉಸ್ತಾದರ ಶಿಷ್ಯರಾಗಿ ಕಲಿಯುತ್ತಿದ್ದರು.ಅಂದು ಮುಕ್ಕಚ್ಚೇರಿಯಲ್ಲಿ ನಡೆದ ಒಂದು ಪ್ರೋಗ್ರಾಮಿಗೆ ತಾಜುಲ್ ಉಲಮಾ ಖ.ಸಿ ಬಂದರು..ಜನಸಾಗರವೇ ಅಲ್ಲಿ ನೆರೆದಿತ್ತು..ಯಾಕೋ ಅಂದು ತಾಜುಲ್ ಉಲಮಾ ತುಸು ಕೋಪೋದ್ರಿಕ್ತರಾಗಿದ್ದರು..ವೇದಿಕೆಯಲ್ಲಿ ತಾಜುಲ್ ಉಲಮಾ ಆಸೀನರಾಗಿದ್ದಾರೆ..ವೇದಿಕೆಯಲ್ಲಿದ್ದ ಇತರರು ತಾಜುಲ್ ಉಲಮಾ ಖ.ಸಿ ರವರ ಸನಿಹ ಹೋಗಲು ಹೆದರುತ್ತಿದ್ದರು..ಅಂತೂ ಕಾರ್ಯಕ್ರಮ ಮುಂದುವರಿಯುತ್ತಿತ್ತು..ತಾಜುಲ್ ಉಲಮಾ ಖ.ಸಿ ರವರೊಂದಿಗೆ ಮಾತನಾಡಲು ಶ್ರಮಿಸಿದವರಿಗೆ ಒಂದೇಟು ಕೂಡಾ ಕೊಟ್ಟಿದ್ದರು..ಅಷ್ಟೊಂದು ಕೋಪದಲ್ಲಿದ್ದ ತಾಜುಲ್ ಉಲಮಾ ಖ.ಸಿ ವೇದಿಕೆಯಲ್ಲಿದ್ದವರೊಂದಿಗೆ ಕೇಳಿದರು.."" ಮಯೆ ವೇಂಡೆಡೋ "" ಮಳೆ ಬೇಡವಾ....ವೇದಿಕೆಯಲ್ಲಿದ್ದವರಿಂದ ಏನೂ ಉತ್ತರವಿಲ್ಲ...ಮತ್ತೆ ಜೋರಾಗಿ ಕೇಳಿದರು.."" ಮಯೆ ಬೇಂಡೆಡೋ "" ಮಳೆ ಬೇಡವಾ...ಆಗ ಮೆಲುಧ್ವನಿಯಲ್ಲಿ ಬೇಕು ಬೇಕು ಅಂತ ವೇದಿಕೆಯಲ್ಲಿದ್ದವರೂ ಸಭಿಕರೂ ಹೇಳಿದರು..ತಾಜುಲ್ ಉಲಮಾ ಖ.ಸಿ ಮಳೆಗಾಗಿ ಪ್ರಾರ್ಥಿಸಿದರು...ಯಾ ಅಲ್ಲಾಹ್....ಈ ಕಾರ್ಯಕ್ರಮ ಮುಗಿಯುವುದರೊಳಗಾಗಿ ಮಳೆಯನ್ನು ನೀಡು ಎಂದು ಪ್ರಾರ್ಥಿಸಿ ತಾಜುಲ್ ಉಲಮಾ ಖ.ಸಿ ಹೋದರು..ಏನದ್ಭುತ..ತಾಜುಲ್ ಉಲಮಾ ರವರ ಕಾರು ಸ್ವಲ್ಪ ಮುಂದಕ್ಕೆ ಹೋಗುವಷ್ಟರಲ್ಲಿ ಕಾರ್ಯಕ್ರಮ ಮುಗಿಯುವುದರೊಳಗಾಗಿ ಭಾರೀ ಮಳೆ ಸುರಿಯಿತು.
ಮುಂದೆ ನಾವು ಮಾಹೆ ಕುಞ್ಞಿಪಳ್ಳಿ ಫತ್ಹುಲ್ ಮಯೀನ್ ಗ್ರಂಥದ ಮುಸನ್ನಿಫ್ ಝೈನುದ್ದೀನ್ ಅಲ್ ಮಖ್ದೂಂ ಸಾನಿ ರವರ ಮಖ್ಬರ ಸಂದರ್ಶಿಸಿದೆವು.ಮತ್ತೆ ನಮ್ಮ ಯಾತ್ರೆ ಪೊನ್ನಾಣಿಗೆ..ಪೊನ್ನಾಣಿ ಸಮೀಪ ರಾತ್ರಿ ಊಟ ಮುಗಿಸಿದೆವು.ರಾತ್ರಿ ಹನ್ನೊಂದು ವರೆಗೆ ಪೊನ್ನಾಣಿ ತಲುಪಿ ಇಶಾ ನಮಾಜು ಮುಗಿಸಿ ಅಲ್ಲಿಯೇ ಮಲಗಿದೆವು..ಸುಬಹ್ ನಮಾಜಿಗೆ ಮುಂಚಿತವಾಗಿ ಎದ್ದು ಮಖಾಂ ಝಿಯಾರತ್ ನಡೆಸಿ ಬಳಿಕ ಸುಬಹ್ ನಮಾಜಿಗೆ ವೆಳಿಯಂಗೋಡ್ ತಲುಪಿದೆವು. ಇತ್ತೀಚೆಗೆ ದೀಪ ಉರಿಸಿದ ವಿಷಯದಲ್ಲಿ ಭಾರೀ ಚರ್ಚೆಯಾಗಿತ್ತು.ಪ..ಪೊನ್ನಾಣಿ ಮಸೀದಿ ಒಳಗಡೆ ಯಾವಾಗಲೂ ಕೆಡದ ಹಾಗೆ ದೀಪ ಉರಿಸಲಾಗುತ್ತದೆ. ಇದರ ಬಗ್ಗೆ ನಮ್ಮ ಯಾತ್ರೆಯಲ್ಲಿದ್ದವರಿಗೆ ಮನದಲ್ಲಿಯೇನೋ ಒಂದು ಸಂಶಯ..ಆಗ ಜಮಾಲ್ ಉಸ್ತಾದ್ ಚುಟುಕಾಗಿ ತಿಳಿಸಿದರು...ದೀಪ ಹಚ್ಚುವಿಕೆ ಎಲ್ಲಾ ಸಂದರ್ಭಗಳಲ್ಲೂ ಹರಾಂ ಅಥವಾ ಶಿರ್ಕ್ ಆಗುವುದಿಲ್ಲ..ಒಬ್ಬ ಮನುಷ್ಯ ಅಲ್ಲಾಹೇತರರಿಗೆ ಇದು ನನ್ನ ರಬ್ಬ್ ಎಂಬ ಉದ್ದೇಶವಿಲ್ಲದೆ ಸುಜೂದ್ ಮಾಡಿದರೆ ಹರಾಂ ಆಗುತ್ತದೆ..ನನ್ನ ರಬ್ಬ್ ಎಂಬ ಉದ್ದೇಶದಿಂದ ಸುಜೂದ್ ಮಾಡಿದರೆ ಶಿರ್ಕ್ ಆಗುತ್ತದೆ...ಅದೇ ರೀತಿ ದೀಪ ಹಚ್ಚುವಿಕೆ ಎಂಬುದು ಸಮಯ,ಸಂದರ್ಭ,ಉದ್ದೇಶ ನೋಡಿ ಶಿರ್ಕ್ ಆಗುತ್ತದೆ.ಕೆಲವೊಮ್ಮೆ ಹರಾಂ ಆಗುತ್ತದೆ..ಕೆಲವೊಮ್ಮೆ ಅನುವದನೀಯವೂ ಆಗುತ್ತದೆ. ಸಾಮಾನ್ಯವಾಗಿ ಕತ್ತಲನ್ನು ಇಲ್ಲವಾಗಿಸಲು ಹಿಂದಿನ ಕಾಲದಲ್ಲಿ ಚಿಮಿಣಿ ದೀಪವನ್ನು ಉರಿಸಲಾಗುತ್ತದೆ. ಇದು ಅನುವದನಿಯವಾಗಿದೆ..ಪೊನ್ನಾಣಿಯಲ್ಲಿರುವ ದೀಪವು ಅದು ಹಿಂದಿನ ಕಾಲದಲ್ಲಿ ಅಲ್ಲಾಹನ ಮಹಾತ್ಮರುಗಳ ಶಿಷ್ಯತ್ವವನ್ನು ಸ್ವೀಕರಿಸಿ ಅಲ್ಲಿ ಕಲಿಯುತ್ತಿದ್ದ ಮುತಅಲ್ಲಿಮರ ಕಲಿಕೆ ಪೂರ್ಣವಾದಾಗ ಪೊನ್ನಾಣಿಯಲ್ಲಿ ಆ ಮುತಅಲ್ಲಿಮರು ಅದಕ್ಕೆ ದೀಪ ಉರಿಸುವ ರೂಢಿ ಛಾಲ್ತಿಯಲ್ಲಿತ್ತು.ಅದು ಅವರಿಗೆ ಸನದು ಸಿಕ್ಕಿದೆ ಎಂಬುದರ ಸಂಕೇತವಾಗಿತ್ತು..ಅದು ಈಗಲೂ ಮಹಾನರುಗಳೊಂದಿಗಿನ ಗೌರವಾದರವನ್ನು ತೋರ್ಪಡಿಸುವ ಸಲುವಾಗಿ ಈಗಲೂ ಆ ದೀಪ ಉರಿಯ ಬಿಡಲಾಗುತ್ತದೆ..ಇದು ಕೂಡಾ ಅನುವದನೀಯವಾಗಿದೆ..ಆದರೆ ಅಮುಸ್ಲಿಮರ ಒಂದು ಸ್ಥಳದಲ್ಲಿ ಅವರ ಧರ್ಮದ ಒಂದು ಪದ್ಧತಿಯೆಂಬಂತೆ ಒಬ್ಬ ಮುಸ್ಲಿಮನು ದೀಪ ಉರಿಸಿದರೆ ಅದು ಶಿರ್ಕ್ ಆಗುತ್ತದೆ..ಜಮಾಲ್ ಉಸ್ತಾದ್ ಇಷ್ಟು ವಿವರಗಳನ್ನು ತಿಳಿಸಿದಾಗ ಯಾತ್ರೆಯಲ್ಲಿದ್ದ ಎಲ್ಲರಿಗೂ ಸಮಾಧಾನವಾಯಿತು.ಬಳಿಕ ವೆಲಿಯಂಗೋಡ್ ಆಶಿಖುರ್‍ರಸೂಲ್ ಹಝ್ರತ್ ಶೈಖ್ ಉಮರ್ ಖಾಲಿ ರ.ಅ ರವರ ಮಖ್ಬರ ಸಂದರ್ಶಿಸಿ ಝಿಯಾರತ್ ನಡೆಸಿದ ನಂತರ ಪುತ್ತನ್ ಪಳ್ಳಿ ಕುಞ್ಞಿ ಅಹ್ಮದ್ ಮುಸ್ಲಿಯಾರ್ ಮಖಾಂ ಝಿಯಾರತ್ ನಡೆಸಿದೆವು.ಬೆಳಗ್ಗಿನ ಉಪಹಾರ ಪುತ್ತನ್ ಪಳ್ಳಿಯಲ್ಲಿ ಸೇವಿಸಿ ನಮ್ಮ ಯಾತ್ರೆಯನ್ನು ಕ್ಯಾಲಿಕಟ್ ಮರ್ಕಝ್ ಕಡೆಗೆ ತಿರುಗಿಸಿದೆವು.ಮರ್ಕಝ್ ನ ನೂತನ ದ್ವಾರವನ್ನು ಕಣ್ತುಂಬಾ ನೋಡಿ ಆಹ್ಲಾದಿಸಿದೆವು.ಸಮಯ ಮಧ್ಯಾಹ್ನವಾಗಿತ್ತು.ಮರ್ಕಝ್ ಸನಿಹದ ಸ್ವೀಕಾರ ಹೋಟೆಲಲ್ಲಿ ಊಟ ಮಾಡಿದೆವು.ನಂತರ ಮಡವೂರ್ ಝಿಯಾರತ್ ನಡೆಸಿ ಸಂಜೆಯೊಳಗಾಗಿ ಕುಟ್ಯಾಡಿ ಸಿರಾಜುಲ್ ಹುದಾ ತಲುಪಿದೆವು..ಮಾಷಾ ಅಲ್ಲಾಹ್, ಸಿರಾಜುಲ್ ಹುದಾ ಸಿಲ್ವರ್ ಜ್ಯುಬಿಲಿ ಸಮಾಪನಾ ಸಮ್ಮೇಳನದಲ್ಲಿ ಸಂಪೂರ್ಣವಾಗಿ ಭಾಗವಹಿಸಿದೆವು..ಆದಿತ್ಯವಾರ ರಾತ್ರಿ ಹನ್ನೆರಡು ಗಂಟೆಗೆ ಕುಟ್ಯಾಡಿಯಿಂದ ಊರಿಗೆ ಮರಳಿದೆವು.ದಾರಿ ಮಧ್ಯೆ  ಪೆರಿಂಗತ್ತೂರ್ ಅಲಿಯ್ಯುಲ್ ಕೂಫಿ ರ.ಅ ರವರ ಮಖಾಂ ಸಂದರ್ಶಿಸಿದ್ದೆವು.
ಅಲ್ ಹಂದುಲಿಲ್ಲಾಹ್.....ಅಬೂ ಅನಸ್ ಜಮಾಲ್ ಉಸ್ತಾದರ ಸಾರಥ್ಯದಲ್ಲಿ ಹೊರಟ ಯಾತ್ರಾ ತಂಡದಲ್ಲಿ ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯ ಬಿ.ಜಿ ಹನೀಫ್ ಹಾಜಿ, ಸಯ್ಯಿದ್ ಮದನಿ ಸುನ್ನೀ ಸೆಂಟ್ರಲ್ ಕಮಿಟಿ ಪ್ರಧಾನ ಕಾರ್ಯದರ್ಶಿ ಅಶ್ರಫ್ ಹಾಜಿ ಮುಕ್ಕಚ್ಚೇರಿ, ಅಯ್ಯೂಬ್ ಹಾಜಿ, ಅಬ್ದುರ್‍ರಹ್ಮಾನ್ ಅಕ್ಕರೆಕೆರೆ, ನವಾಝ್ ಸಖಾಫಿ ಉಳ್ಳಾಲ, ಮಿಕ್ದಾದ್ ಮುಕ್ಕಚ್ಚೇರಿ, ಮುಹಮ್ಮದ್ ಕೈಕೋ, ಫಾರೂಖ್ ಬೊಟ್ಟು, ಆಸಿಫ್ ಮುಕ್ಕಚ್ಚೇರಿ, ಅಹ್ಸನ್ ಒಂಭತ್ತುಕೆರೆ, ಅಬೂಬಕರ್ ಹಳೆಕೋಟೆ,  ಮೊಹಮ್ಮದ್ ಹಳೆಕೋಟೆ ಹಾಗು ಇತರರು ಇದ್ದರು.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿ...