Wednesday, 9 November 2016

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ..ಸಂಚಿಕೆ - 13

   ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ

     ---------------------------

               ಸಂಚಿಕೆ -13

ಪ್ರತಿರೋಧ.....

ಸಲಾಂ ಎಂಬ ಪವಿತ್ರ ನಾಮವಿರುವ ಅಲ್ಲಾಹನ ಶಾಂತಿಯ ಸಂದೇಶವಾಗಿದೆ ಪವಿತ್ರ ಇಸ್ಲಾಂ.ಪ್ರವಾದಿ ಸ.ಅ ರವರು ಜನರಿಗೆ ಉದಾತ್ತವಾದ ಶಾಂತಿಯ ಹಾದಿಯನ್ನು ತೋರಿಸಿದರು.ಮುಸ್ಲಿಮರು ಪರಸ್ಪರ ಕಾಣುವಾಗ ವಿನಿಮಯ ಮಾಡುವ ಮಾತು "ಅಸ್ಸಲಾಮು ಅಲೈಕುಂ" ( ನಿಮಗೆ ಅಲ್ಲಾಹನ ರಕ್ಷಣೆ ಇರಲಿ ) ಎಂದಾಗಿದೆ.ಇಸ್ಲಾಂ ಶಾಂತಿ ಸೌಹಾರ್ದತೆಯನ್ನು ಸಾರುವ ಧರ್ಮವಾಗಿದೆ.
        ನೆಬಿ ಸ.ಅ ಜನರನ್ನು ಇಸ್ಲಾಮಿಗೆ ಆಹ್ವಾನಿಸುತ್ತಾ 13 ವರ್ಷ ಮಕ್ಕಾದಲ್ಲಿ ವಾಸಿಸಿದ್ದರು. ನೆಬಿ ಸ.ಅ ರವರನ್ನು ಮತ್ತು ವಿಶ್ವಾಸಿಗಳಾದ ಅನುಯಾಯಿಗಳನ್ನು ಕುರೈಶಿಗಳು ಕಠಿಣವಾಗಿ ಹಿಂಸಿಸಿದರು.ಕೊನೆಗೆ ಸ್ವಂತ ಊರಾದ ಮಕ್ಕಾದಿಂದ ಹೊರಹಾಕಿದರು.ಸ್ವಂತ ಊರು,ಮನೆ,ಕುಟುಂಬ ಹಾಗು ಸಂಪತ್ತನ್ನು ಉಪೇಕ್ಷಿಸಿ ಮದೀನ ತಲುಪಿದ ಅವರೊಂದಿಗೆ ಕುರೈಶಿಗಳು ಮತ್ತೆ ಶತ್ರುತ್ವ ಬೆಳೆಸಿದರು.ಅವರ ಕಡೆಯಿಂದ ಆಕ್ರಮಣಗಳು ಮುಂದುವರಿಯಿತು.ಶಾಂತವಾದ ವಾತಾವರಣ ನಿರ್ಮಾಣ ಮಾಡುವುದು ಅನಿವಾರ್ಯತೆಯಾದುದರಿಂದ ಅಲ್ಲಾಹು ನೆಬಿ ಸ.ಅ ರವರಿಗೆ ಯುದ್ಧಕ್ಕೆ ಅನುಮತಿ ನೀಡಿ ಆಯತ್ ಅವತೀರ್ಣಗೊಳಿಸಿದನು.ಹಿಜ್ರಾ ಎರಡನೇ ವರ್ಷದ ಸಫರ್ ತಿಂಗಳಲ್ಲಿಯಾಗಿದೆ ಈ ಅನುಮತಿ ಲಭಿಸಿದ್ದು.

ಅಲ್ಲಾಹು ಹೇಳಿದನು.
ಯುದ್ಧಕ್ಕೆ ವಿಧೇಯರಾದವರಿಗೆ ಯುದ್ಧ ಮಾಡಲು ಅನುಮತಿ ನೀಡಿರುತ್ತೇನೆ.ಕಾರಣ ಅವರು ಆಕ್ರಮಣಕ್ಕೊಳಗಾದವರಾಗಿದ್ದಾರೆ.ಖಂಡಿತವಾಗಿಯೂ ಅಲ್ಲಾಹು ಅವರಿಗೆ ಸಹಾಯ ಮಾಡಲು ಸಾಮರ್ಥ್ಯವುಳ್ಳವನಾಗಿದ್ದಾನೆ.

ಈ ಆಯತ್ ಅವತೀರ್ಣವಾಗುವುದಕ್ಕಿಂತ ಮೊದಲು 70 ಕ್ಕಿಂತಲೂ ಅಧಿಕ ಆಯತುಗಳಲ್ಲಿ ಯುದ್ಧವನ್ನು ನಿಷೇಧಿಸಿ ಆದೇಶ ಬಂದಿತ್ತು.
       ಯಹೂದಿಗಳು ನೆಬಿ ಸ.ಅ ರವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು.ಅವರು ಒಪ್ಪಂದವನ್ನು ಮುರಿದು ವಂಚನೆ ನಡೆಸಿದಾಗ ಅಲ್ಲಾಹು ಅವರೊಂದಿಗೆ ಯುದ್ಧಕ್ಕೆ ಅನುಮತಿ ನೀಡಿದನು.ಮುಶ್ರಿಕರೆಲ್ಲರೂ ಒಗ್ಗಟ್ಟಾಗಿ ಮುಸ್ಲಿಮರ ವಿರುದ್ಧ ಯುದ್ಧಕ್ಕೆ ಬಂದಾಗ ಅವರೆಲ್ಲರೊಂದಿಗೂ ಯುದ್ಧ ಮಾಡಲು ಅಲ್ಲಾಹು ಆದೇಶವಿತ್ತನು.

"ಬಹು ದೈವಾರಾಧಕರೊಂದಿಗೆ ಎಲ್ಲರೂ ಒಗ್ಗಟ್ಟಾಗಿ ಯುದ್ಧ ಮಾಡಿರಿ.ಅವರು ನಿಮ್ಮೊಂದಿಗೆ ಒಗ್ಗಟ್ಟಾಗಿ ಯುದ್ಧ ಮಾಡುವಂತೆ."

ಚುಟುಕಾಗಿ ಹೇಳುವುದಾದರೆ ಯುದ್ಧಕ್ಕೆ ಬಂದವರೊಂದಿಗೆ ಮಾತ್ರ ಯುದ್ಧವಿರುವುದು.
        ಯುದ್ಧಕ್ಕೆ ಅನುಮತಿ ಲಭಿಸಿದುದರಿಂದ ಶಾಂತಿ ಸ್ರಷ್ಟಿಸಲು ನೆಬಿ ಸ.ಅ ಹಲವು ಯುದ್ಧಗಳು ನಡೆಸಿದರು.ಅದಕ್ಕೆ ಬೇಕಾದ ತಯಾರಿಯನ್ನು ನಡೆಸಿದರು.27 ಯುದ್ಧಗಳು ನೆಬಿ ಸ.ಅ ರವರ ನೇತ್ರತ್ವದಲ್ಲಿಯಾಗಿತ್ತು.ಈ ಯುದ್ಧಕ್ಕೆ  ಗಝ್ವಃ ಎಂದು ಕರೆಯಲಾಗುತ್ತದೆ.ಈ 27 ಯುದ್ಧಗಳಲ್ಲಿ ಕೇವಲ 8 ರಲ್ಲಿ ಮಾತ್ರವಾಗಿದೆ ಪರಸ್ಪರ ಕಾಳಗ,ಘರ್ಷಣೆ ಉಂಟಾದದ್ದು.ಬದರ್, ಉಹುದ್, ಖಂದಕ್, ಮುರೈಸಿಹ್, ಬನೂ ಖುರೈಲಃ, ಖೈಬರ್, ಹುನೈನ್, ತ್ವಾಯಿಫ್ ಎಂಬ ಎಂಟು ಯುದ್ಧಗಳು...
ನೆಬಿ ಸ.ಅ ಉಹುದ್ ನಲ್ಲಿ ಮಾತ್ರ ಯುದ್ಧ ಮಾಡಿದ್ದರು.ನೆಬಿ ಸ.ಅ ರವರ ಪವಿತ್ರ ಹಸ್ತದಿಂದ " ಉಬಯ್ಯು ಬ್ನು ಖಲಫ್ " ಎಂಬ ನಿರ್ಭಾಗ್ಯವಂತ ಮಾತ್ರ ಸಾವನ್ನಪ್ಪಿದ್ದು. ನೆಬಿ ಸ.ಅ 47 ಯುದ್ಧ ಸಂಘಗಳನ್ನು ಬೇರೆ ಬೇರೆ ಸ್ಥಳಗಳಿಗೆ ಕಳುಹಿಸಿದ್ದರು.ಈ ಯುದ್ಧಗಳಿಗೆ " ಸರಿಯ್ಯಃ " ಎಂದು ಕರೆಯಲಾಗುತ್ತದೆ.ಇಸ್ಲಾಮಿನ ಈ ಎಲ್ಲಾ ಯುದ್ಧಗಳಲ್ಲಿ 1018 ಮಂದಿ ಮಾತ್ರ ಸಾವನ್ನಪ್ಪಿದರು.259 ಮುಸ್ಲಿಮರು ಮತ್ತು 759 ಅಮುಸ್ಲಿಮರು.ಯುದ್ಧಗಳ ಚರಿತ್ರೆಯಲ್ಲಿಯೇ ಅತೀ ಕಡಿಮೆ ಸಾವು ನೋವುಗಳು ಸಂಭವಿಸಿದ್ದು ಇಸ್ಲಾಮಿನ ಯುದ್ಧಗಳಲ್ಲಿಯಾಗಿದೆ. ಪ್ರತಿರೋಧ ಮತ್ತು ಪ್ರಬೋಧನೆ ಈ ಎರಡು ಗುರಿಯನ್ನಿಟ್ಟು ಯುದ್ಧ ಮಾಡಿದ ಕಾರಣದಿಂದಾಗಿದೆ ಹೀಗೆ ಸಂಭವಿಸಿದ್ದು.ಆದುದರಿಂದಲೇ ನೆಬಿ ಸ.ಅ ಮಕ್ಕಾ ಕುರೈಶಿಗಳ ವಿರುದ್ಧ ನೇರವಾಗಿ ಯುದ್ಧ ಮಾಡದೇ ಕುರೈಶೀ ವ್ಯಾಪಾರ ಸಂಘದ ವಿರುದ್ಧ ಸೈನ್ಯವನ್ನು ಕಳುಹಿಸಿದ್ದು. ಮುಸ್ಲಿಮರಿಗೆ ಧೈರ್ಯ ನೀಡಲು ಮತ್ತು ಮಕ್ಕಾ ಮುಶ್ರಿಕರನ್ನು ದುರ್ಬಲಗೊಳಿಸಲು ಹಾಗು ಮುಹಾಜಿರುಗಳಿಗೆ ನಷ್ಟವಾಗಿ ಹೋದ ಸಂಪತ್ತನ್ನು ಪುನಃ ಮತ್ತೆ ಪಡೆಯುವ ಸಲುವಾಗಿತ್ತು.ಮುಶ್ರಿಕರನ್ನು ಒಪ್ಪಂದಕ್ಕೆ ಪ್ರೇರೇಪಿಸುವ ಸಲುವಾಗಿ ಈ ಎಲ್ಲಾ ತಂತ್ರಗಳನ್ನು  ನೆಬಿ ಸ.ಅ ಉಪಯೋಗಿಸಿದ್ದರು.

ಆದರೆ....
ಅವರು ಅದಕ್ಕೆ ತಯ್ಯಾರಾಗದ ಕಾರಣ ಯುದ್ಧವಲ್ಲದೆ ಬೇರೇನೂ ದಾರಿ ಇಲ್ಲವಾಯಿತು..

ಮುಂದುವರಿಯುವುದು....
ಮುಂದಿನ ಸಂಚಿಕೆಯಲ್ಲಿ ಇಸ್ಲಾಮಿನ ಐತಿಹಾಸಿಕ ವಿಜಯಕ್ಕೆ ನಿಮಿತ್ತವಾದ ಬದರ್ ಯುದ್ಧ..

ಓದಿರಿ.
®ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ
Mob +918105745760

No comments:

Post a Comment

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿ...