Saturday, 15 October 2016

ಸಯ್ಯಿದ್ ಮದನಿ ಖ.ಸಿ...ಭಾಗ -03

*ಉಳ್ಳಾಲ ಬೆಳಗಿಸಿದ ಮಹಾ ಪುರುಷ ಖುತುಬುಝ್ಝಮಾನ್ ಸಯ್ಯಿದ್ ಮದನಿ ಖ.ಸಿ*

              ಭಾಗ - 03

✍ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ

*ಸಯ್ಯಿದ್ ಮದನಿ ಖ.ಸಿ ರವರ ಕೆಲವೊಂದು ಕರಾಮತುಗಳು*

ವ್ಯಾಪಾರ ನಿಮಿತ್ತ ಸರಕುಗಳೊಂದಿಗೆ ಮಂಗಳೂರು ಬಂದರು ಬಂದಿಳಿದ ತಂಡವೊಂದು ಸರಕುಗಳನ್ನು  ಇಳಿಸುತ್ತಿದ್ದಾಗ ಹಣದ ಚೀಲ ಸಮುದ್ರಕ್ಕೆ ಬಿದ್ದು ಬಿಟ್ಟಿತು.ತಂಡ ಬೆಚ್ಚಿ ಬಿದ್ದಿತು.ಇನ್ನೇನು ಮಾಡುವುದು ? ವ್ಯಾಪಾರದ ನಿಮಿತ್ತ ತಂದ ಹಣವೆಲ್ಲವೂ ಸಮುದ್ರ ಪಾಲಾಗಿದೆ.ಇದೇ ಬೇಸರದಲ್ಲಿ ಮಂಗಳೂರು ಪಟ್ಟಣ ತಲುಪಿದರು.ಅಲ್ಲಿರುವ ಜನರೊಂದಿಗೆ ತಮ್ಮ ಅಹವಾಲನ್ನು ತೋಡಿಕೊಂಡರು.ಆಗ ಅವರು ಹೇಳಿದರು.ಇಲ್ಲಿಯೇ ಹತ್ತಿರದಲ್ಲಿ ಉಳ್ಳಾಲ ಎಂಬ ಪ್ರದೇಶದಲ್ಲಿ ಮದನಿ ತಂಗಳ್ ಎಂಬ ಪ್ರಸಿದ್ಧ ಸಯ್ಯಿದರು ಇದ್ದಾರೆ.ಅವರಲ್ಲಿ ನಿಮ್ಮ ವಿಷಯವನ್ನು ತಿಳಿಸಿ.ಅವರೇನಾದರೂ ಪರಿಹಾರವನ್ನು ತಿಳಿಸುವರು.ವ್ಯಾಪಾರ ತಂಡ ಮದನಿ ತಂಗಳ್ ರವರ ಬಳಿ ತಮ್ಮ ವಿಷಯವನ್ನು ಮುಟ್ಟಿಸಲು ತಕ್ಷಣ ಉಳ್ಳಾಲಕ್ಕೆ ಬಂದರು.ಮದನಿ ತಂಗಳ್ ರೊಂದಿಗೆ ತಮ್ಮ ದುಃಖವನ್ನು ಸವಿವರವಾಗಿ ತಿಳಿಸಿದರು.ಇದನ್ನು ಆಲಿಸಿಕೊಂಡ ಮದನಿ ತಂಗಳ್ ಅಲ್ಪ ಸಮಯ ಮೌನದಿಂದಿದ್ದು ಬಳಿಕ ಹೇಳಿದರು.ನೀವೀಗ ಹೋಗಿ.ನಾಳೆ ಬನ್ನಿ..ಅಂತೆಯೇ ವ್ಯಾಪಾರ ತಂಡ ತಂಗಳ್ ಸನ್ನಿಧಿಯಿಂದ ಹಿಂದಿರುಗಿ ಮರುದಿನ ಬಂದರು.ಏನಾಶ್ಚರ್ಯ !!
ಸಯ್ಯಿದ್ ಮದನಿ ತಂಗಳ್ ರವರು ಹಣದ ಚೀಲವನ್ನು ಎತ್ತಿ ತೋರಿಸುತ್ತಾ ಕೇಳಿದರು.ನಿಮ್ಮ ಹಣದ ಚೀಲ ಇದುವೇನಾ ?.ಚೀಲದಿಂದ ನೀರಿನ ಹನಿ ತೊಟ್ಟಿಕ್ಕುತ್ತಿತ್ತು.ವ್ಯಾಪಾರ ತಂಡ ಬಹಳ ಆವೇಶಭರಿತರಾಗಿ ಹೇಳಿದರು.ಹೌದೌದು.ನಮ್ಮ ಚೀಲ ಇದುವೇ ?.ಮದನಿ ತಂಗಳ್ರವರಿಂದ ಹಣದ ಚೀಲವನ್ನು ಪಡೆದು ಬಹಳ ಸಂತೋಷದಿಂದ ಸಂತ್ರಪ್ತರಾಗಿ ಮರಳಿದರು.

ಕರಾಮತ್ - 2

ಸಯ್ಯಿದ್ ಮದನಿ ತಂಗಳ್ ರವರು ಉಳ್ಳಾಲದಲ್ಲಿದ್ದ ಪುಟ್ಟ ಮಸೀದಿಯಲ್ಲಿ ಇಅತಿಕಾಫಿನ ನಿಯ್ಯತ್ ನೊಂದಿಗೆ ಆರಾಧನಾ ನಿರತರಾಗಿದ್ದರು.ಹೀಗಿರಲು ಒಂದು ದಿವಸ ಮಸೀದಿಯ ಹತ್ತಿರದಿಂದಲೇ ಅಮುಸ್ಲಿಮರ ಆರಾಧನಾಲಯದಿಂದ ಭಜನೆಗಳು,ಗಂಟೆಗಳ ಶಬ್ದಗಳು,ಚೆಂಡೆ ವಾದ್ಯಗಳ ಮಿಶ್ರಿತ ಶಬ್ದ ಕಿವಿಗಡಚ್ಚಿಕ್ಕುವಂತೆ ಕೇಳಿಸಿದವು.ಸನಿಹವಿದ್ದವರಲ್ಲಿ ವಿಷಯವನ್ನು ಕೇಳಿದರು.ಅವರು ಹೇಳಿದರು.ವರ್ಷಕ್ಕೊಮ್ಮೆ ಇಲ್ಲಿ ಅಮುಸ್ಲಿಮರು ಸೇರುತ್ತಾರೆ.ಅವರ ಪೂಜೆ ಉತ್ಸವ ಇಲ್ಲಿ ನಡೆಯುತ್ತದೆ..ಅದರ ಶಬ್ದವಾಗಿದೆ ಇದು.ವಿಷಯವನ್ನು ಅರಿತ ಮದನಿ ತಂಗಳ್ ಖ.ಸಿ 'ಇದು ಇಲ್ಲಿ ಮಸೀದಿಗೆ ಸಮೀಪ ಸರಿಯಾಗದು' ಎಂದು ಮನಗಂಡ ಮದನಿ ತಂಗಳ್ ಹೇಳಿದರು.ಶೈತಾನ್ ಗಳೇ ಇಲ್ಲಿಂದ ಜಾಗ ಖಾಲಿ ಮಾಡಿ.ಹೇಳಿದ್ದೇ ತಡ..ಅಮುಸ್ಲಿಮರು ಆರಾಧಿಸುತ್ತಿದ್ದ ಶೈತಾನ್ ಗಳು ಅಪ್ರತ್ಯಕ್ಷರಾದರು.ಪೂಜೆಗಳು ನಿಂತವು.ಉತ್ಸವ ಸ್ತಬ್ದವಾಯಿತು.
ಅಮುಸ್ಲಿಮರ ನಾಯಕ ಮತ್ತು ಅನುಯಾಯಿಗಳು ಮದನಿ ತಂಗಳ್ ರವರ ಬಳಿ ಬಂದು ಕ್ಷಮೆಯಾಚಿಸಿದರು.ಮಸೀದಿಗೆ ಸಮೀಪ ಇದು ಸರಿಯಲ್ಲ ಎಂದ ಮದನಿ ತಂಗಳ್ ಹೇಳಿದರು.ಒಂದು ಕಲ್ಲನ್ನು ನಾನು ಎಸೆದು ಬಿಡುತ್ತೇನೆ.ಆ ಎಸೆಯಲ್ಪಟ್ಟ ಕಲ್ಲು ಎಲ್ಲಿ ಹೋಗಿ ಬೀಳುತ್ತದೋ ಅಲ್ಲಿ ತಮ್ಮ ದೇವಸ್ಥಾನವನ್ನು ನಿರ್ಮಿಸಿ.ಅಂತೆಯೇ ಮದನಿ ತಂಗಳ್ ಮಸೀದಿಯ ಮುಂಭಾಗದಿಂದ ಕಲ್ಲನ್ನು ಎಸೆದರು.ಆ ಕಲ್ಲು ಹೋಗಿ ಮುಟ್ಟಿದ ಸ್ಥಳದಲ್ಲಿ ಅವರು ಅವರ ದೇವಸ್ಥಾನವನ್ನು ಕಟ್ಟಿಸಿದರು.ಇಂದಿಗೂ ಅವರ ಆ ದೇವಸ್ಥಾನ ಮಸೀದಿಯ ಅನತಿ ದೂರದಲ್ಲಿ ಕಾಣಬಹುದು.

ಕರಾಮತ್ -3

ಸಯ್ಯಿದ್ ಮದನಿ ತಂಗಳ್ ಖ.ಸಿ ರವರ ವಫಾತಿನ ನಂತರ ನಡೆದ ಒಂದು ಘಟನೆ.
ಒಂದು ದಿನ ರಾತ್ರಿ ಕಳ್ಳನೊಬ್ಬ ದರ್ಗಾದ ಹರಕೆಯ ಡಬ್ಬಿಯಿಂದ ಹಣ ಕದಿಯಲು ದರ್ಗಾದೊಳಗೆ ಪ್ರವೇಶಿಸಿ ಹರಕೆಯ ಡಬ್ಬಿಯನ್ನೇ ಎಗರಿಸಿ ಓಡಲೆತ್ನಿಸಿದಾಗ ಕಣ್ಣಿಗೆ ಕತ್ತಲು ಆವರಿಸಿತು.ಹೊರ ಬರಲು ದಾರಿ ಕಾಣದೇ ಚಡಪಡಿಸಿದ.ಸುಬಹಿ ಬಾಂಗ್ ಕೊಡಲು ಮುಅದ್ಸಿನ್ ಮಸೀದಿಗೆ ಬರುವ ತನಕ ನಿಸ್ಸಹಾಯಕನಾಗಿ ನಿಂತಿದ್ದ...ಮುಅದ್ಸಿನ್ ಕಳ್ಳನನ್ನು ಹಿಡಿದು ವಿಚಾರಿಸಿದಾಗ ಸತ್ಯ ಬಾಯಿಬಿಟ್ಟನು.ಮುಅದ್ಸಿನ್ ಅವನಿಗೆ ಉಪದೇಶವನ್ನು ನೀಡಿ ಹರಕೆ ಡಬ್ಬಿಯನ್ನು ಯಥಾ ಸ್ಥಾನದಲ್ಲಿಡಲು ಸೂಚಿಸಿದರು.ಕಳವುಗೈಯ್ಯಲು ಯತ್ನಿಸಿದ್ದ ಹರಕೆ ಡಬ್ಬಿಯನ್ನು ಯಥಾ ಸ್ಥಾನದಲ್ಲಿರಿಸಿ ಅವನು ಪಶ್ಚಾತಾಪಪಟ್ಟನು..ಇನ್ನೆಂದಿಗೂ ಇಂತಹ ಕ್ರತ್ಯಕ್ಕಿಳಿಯಲಾರೆನೆಂದು ದ್ರಢನಿಶ್ಚಯ ಮಾಡಿದನು.ಮುಂದಕ್ಕೆ ಒಬ್ಬ ಉತ್ತಮ ವ್ಯಕ್ತಿಯಾಗಿ ಪರಿವರ್ತಿತನಾದನು.

*ಮುಂದುವರಿಯುವುದು*

✍ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ
+918105745760

No comments:

Post a Comment

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿ...