ಉಳ್ಳಾಲ ಬೆಳಗಿಸಿದ ಮಹಾ ಪುರುಷ
ಖುತುಬುಝ್ಝಮಾನ್ ಸಯ್ಯಿದ್
ಮದನಿ ಖ.ಸಿ
*ಭಾಗ -05*
✍ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ
*ಸಯ್ಯಿದ್ ಮದನಿ ತಂಗಳ್ ವಫಾತಿನ ನಂತರ ನಡೆದ ಮತ್ತೊಂದು ಘಟನೆ*
ಒಂದು ದಿನ ಜನ್ಮನಾ ಮೂಕನಾಗಿದ್ದ ವ್ಯಕ್ತಿ ಸಯ್ಯಿದ್ ಮದನಿ ತಂಗಳ್ ರವರ ಸನ್ನಿಧಿಗೆ ಬಂದು ತನ್ನ ದುಃಖವನ್ನು ತೋಡಿಕೊಂಡನು. ಸಯ್ಯಿದ್ ಮದನಿ ತಂಗಳ್ ರವರನ್ನು ಮಧ್ಯವರ್ತಿಯನ್ನಾಗಿಸಿ ತನಗೆ ಮಾತು ಬರಿಸಲು ಅಲ್ಲಾಹನಲ್ಲಿ ಬೇಡಿಕೊಂಡನು.ಅಷ್ಟರಲ್ಲಿ ಭಾರೀ ಬಿರುಗಾಳಿಯೊಂದಿಗೆ ಧಾರಾಕಾರ ಮಳೆಯು ಸುರಿಯಲಾರಂಭಿಸಿತು.ಪ್ರಕ್ರತಿಯ ರೌದ್ರಾವತಾರ ಮುಂದುವರಿದಾಗ ಜನರು ರಕ್ಷಣೆಗಾಗಿ ಅಲ್ಲಿಂದಿಲ್ಲಿಗೆ ಓಡಲು ಆರಂಭಿಸಿದರು.ಈ ಮೂಕ ವ್ಯಕ್ತಿಯೂ ಓಡುವ ರಭಸದಲ್ಲಿ ಕಾಲಿಗೆ ಕಲ್ಲು ಎಡವಿ ಬಿದ್ದು ಬಿಟ್ಟನು.ಏನಾಶ್ಚರ್ಯ!....ಬಿದ್ದಲ್ಲಿಂದ ಮೇಲೇಳಲಾಗದೆ ರಕ್ಷಣೆಗಾಗಿ ಇತರರೊಂದಿಗೆ ಸ್ಪಷ್ಟ ಮಾತಿನಿಂದ ಸಹಾಯಕ್ಕೆ ಅಂಗಲಾಚುತ್ತಿದ್ದನು.ಇತರರು ಅವನಿಗೆ ಮೇಲೇಳಲು ಸಹಾಯ ಮಾಡಿದರು.ಒಟ್ಟಿನಲ್ಲಿ ಜನ್ಮನಾ ಮೂಕನಾಗಿದ್ದ ವ್ಯಕ್ತಿ ಅಂದಿನಿಂದ ಮಾತನಾಡಲು ಆರಂಭಿಸಿದನು....
ಇಂತಹ ಹಲವಾರು ಕರಾಮತುಗಳು ತನ್ನ ನಿಜ ಜೀವನದಲ್ಲೂ ವಫಾತಿನ ನಂತರವೂ ನಡೆದಿದೆ.ನಡೆಯುತ್ತಲೂ ಇದೆ....ಅಲ್ಲಾಹನ ಅವುಲಿಯಾಗಳ ಕರಾಮತ್ ಮರಣದ ನಂತರವೂ ನಿರಂತರ ಮುಂದುವರಿಯುತ್ತದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಇದು...ಸಯ್ಯಿದ್ ಮದನಿ ತಂಗಳ್ ರವರ ಭಕ್ತಿಪೂರ್ಣ ಆಧ್ಯಾತ್ಮಿಕ ಜೀವನ ಜನಮನದಲ್ಲಿ ಇಂದಿಗೂ ಅಚ್ಚಳಿಯದೇ ಉಳಿದಿದೆ.ಪ್ರತೀ ಐದು ವರ್ಷಕ್ಕೊಮ್ಮೆ ಉಳ್ಳಾಲದಲ್ಲಿ ಮದನಿ ತಂಗಳರ ಉರೂಸ್ ಹಲವಾರು ದೀನೀ ಕಾರ್ಯಕ್ರಮಗಳೊಂದಿಗೆ ಬಹಳ ವಿಜ್ರಂಭಣೆಯಿಂದ ನಡೆದು ಬರುತ್ತಿದೆ....ತಾಜುಲ್ ಉಲಮಾ ಖ.ಸಿ ರವರ ಹಯಾತ್ ಕಾಲದಲ್ಲಿ ಉರೂಸ್ ಕಾರ್ಯಕ್ರಮದ ನೇತ್ರತ್ವ ತಾಜುಲ್ ಉಲಮಾ ಖ.ಸಿ ವಹಿಸುತ್ತಿದ್ದರು..ವಫಾತಿನ ಬಳಿಕ ಉರೂಸ್ ಕಾರ್ಯಕ್ರಮದ ನೇತ್ರತ್ವವನ್ನು ದ.ಕ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿಯೂ ಉಳ್ಳಾಲ ತಂಗಳರ ಸುಪುತ್ರರೂ ಆದ ಸಯ್ಯಿದ್ ಫಝಲ್ ಕೋಯಮ್ಮ ತಂಗಳ್ ನಿರ್ವಹಿಸುತ್ತಿದ್ದಾರೆ.....
ಸಯ್ಯಿದ್ ಮದನಿ ದರ್ಗಾ ಸಮಿತಿಯ ಅಧೀನದಲ್ಲಿ ಹಲವಾರು ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣ ಸಂಸ್ಥೆಗಳು ನಡೆದು ಬರುತ್ತಿದೆ...ಇದಕ್ಕೆ ಭರಿಸುವ ಸಂಪೂರ್ಣ ಖರ್ಚುವೆಚ್ಚಗಳು ಸಯ್ಯಿದ್ ಮದನಿ ಖ.ಸಿ ದರ್ಬಾರಿನಿಂದ ಹರಿದು ಬರುತ್ತಿದೆ....ಈ ಸಂಸ್ಥೆಗಳ ಸುಸೂತ್ರ ನಿರ್ವಹಣೆಗಾಗಿ 1982 ರಲ್ಲಿ ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ಹಾಗೂ 1986 ರಲ್ಲಿ ಸಯ್ಯಿದ್ ಮದನಿ ಅರೆಬಿಕ್ ಎಜ್ಯುಕೇಶನಲ್ ಟ್ರಸ್ಟನ್ನೂ ರಚಿಸಲಾಯಿತು.
ಸಯ್ಯಿದ್ ಮದನಿ ಅರೆಬಿಕ್ ಎಜ್ಯುಕೇಶನಲ್ ಟ್ರಸ್ಟ್ ನ ಅಧೀನದಲ್ಲಿ 28 ಮಸೀದಿಗಳು , 33 ಮದ್ರಸಗಳು,ಸಯ್ಯಿದ್ ಮದನಿ ಅರೆಬಿಕ್ ಶರೀಅತ್ ಕಾಲೇಜು,ಹಿಫಲ್ ಕಾಲೇಜು ಹಾಗೂ ದಅವಾ ಕಾಲೇಜು ನಡೆದುಬರುತಿದೆ.
ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ 3 ವಿಮೆನ್ಸ್ ಕಾಲೇಜು, 1 ಡಿಗ್ರಿ ಕಾಲೇಜು, 1 ಐಟಿಐ ಸಹಿತ ಕನ್ನಡ ಉರ್ದು ಇಂಗ್ಲಿಷ್ ಮಾಧ್ಯಮಗಳಲ್ಲಿ ಪ್ರೈಮರಿ ಹಾಗೂ ಹೈಸ್ಕೂಲ್ ಶಾಲೆಗಳನ್ನೊಳಗೊಂಡು 16 ಸಂಸ್ಥೆಗಳು ನಡೆದು ಬರುತಿದೆ...ಈ ಎರಡು ಟ್ರಸ್ಟ್ ನ ಅಧೀನದಲ್ಲಿ ಸುಮಾರು 8,000 ಕ್ಕೂ ಮಿಕ್ಕ ವಿದ್ಯಾರ್ಥಿಗಳು ಕಲಿಯುತ್ತಿದ್ದು 450 ಕ್ಕೂ ಮಿಕ್ಕ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ.....
ಅಧರ್ಮ ಅರಾಜಕತೆ ಅನ್ಯಾಯ ಅನೀತಿ ತುಂಬಿ ತುಳುಕಾಡುತ್ತಿದ್ದ ಹದಿನಾರನೇ ಶತಮಾನದಲ್ಲಿ ಉಳ್ಳಾಲಕ್ಕೆ ಬಂದು ಇಸ್ಲಾಮಿನ ಸುಂದರಾಶಯಾದರ್ಶಗಳನ್ನು ಜನರೆಡೆಯಲ್ಲಿ ಬಿತ್ತಿ ಜನರನ್ನು ಸಂಪೂರ್ಣವಾಗಿ ಇಸ್ಲಾಮಿನಲ್ಲಿ ಲೀನವಾಗಿಸಿ ಕೆಡುಕಿನಿಂದ ವಿಮುಕ್ತಿ ಹೊಂದಿ ಒಳಿತಿನೆಡೆಗೆ ಕೊಂಡೊಯ್ದು ಉಳ್ಳಾಲವನ್ನು ಬೆಳಗಿಸಿ ವಿಶ್ವ ಭೂಪಟದಲ್ಲಿ ರಾರಾಜಿಸುವಂತೆ ಮಾಡಿದವರಾಗಿದ್ದಾರೆ ಖುತುಬುಝ್ಝಮಾನ್ ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ ಖ.ಸಿ......
ಬಳಿಕ ಕಾಲಕ್ರಮೇಣ ಇಪ್ಪತ್ತನೇ ಶತಮಾನದಲ್ಲಿ ನೂತನವಾದದ ಸೋಂಕು ಕೇರಳ ಹಾಗೂ ಕರ್ನಾಟಕದ ಕೆಲ ಪ್ರದೇಶಗಳಿಗೆ ಹಬ್ಬಿದಾಗ ನೈಜ ಸುನ್ನತ್ ಜಮಾಅತಿನ ಆಶಯಾದರ್ಶಗಳನ್ನು ಜನರೆಡೆಯಲ್ಲಿ ಪಸರಿಸಿ ಇಸ್ಲಾಮಿಗೆ ಶಕ್ತಿ ತುಂಬಿದ ಇನ್ನೋರ್ವ ಉಳ್ಳಾಲದ ಮಹಾನರಾಗಿದ್ದಾರೆ ಸಯ್ಯಿದ್ ತಾಜುಲ್ ಉಲಮಾ ಉಳ್ಳಾಲ ತಂಗಳ್....ಅಲ್ಲಾಹು ಈ ಎರಡು ಮಹಾನರುಗಳ ಪದವಿಯನ್ನು ಉನ್ನತಿಗೇರಿಸಲಿ..ಆಮೀನ್...
ಸಯ್ಯಿದ್ ಮದನಿ ತಂಗಳ್ ಹಾಗೂ ತಾಜುಲ್ ಉಲಮಾ ಉಳ್ಳಾಲ ತಂಗಳ್ ನಮಗೆ ತೋರಿಸಿ ಕೊಟ್ಟ ಇಸ್ಲಾಮಿನ ನೈಜ ಹಾದಿಯನ್ನು ನಾವು ಅನುಸರಿಸುವವರಾಗೋಣ..ಆ ಮೂಲಕ ನಾವು ಇಹಪರ ವಿಜಯಿಗಳ ಸಾಲಿಗೆ ಸೇರೋಣ....ಅಲ್ಲಾಹು ತೌಫೀಖ್ ನೀಡಲಿ..ಆಮೀನ್.....
ದುವಾ ವಸಿಯ್ಯತಿನೊಂದಿಗೆ ವಿರಾಮ..
*ತಾಜುಲ್ ಉಲಮಾ ಖ.ಸಿ ಉಳ್ಳಾಲದ ಮುತ್ತು*,ಮತ್ತು *ಉಳ್ಳಾಲವನ್ನು ಬೆಳಗಿಸಿದ ಮಹಾ ಪುರುಷ ಖುತುಬುಝ್ಝಮಾನ್ ಸಯ್ಯಿದ್ ಮದನಿ ತಂಗಳ್ ಖ.ಸಿ* ಈ ಎರಡು ಲೇಖನಗಳ ಸಂಪೂರ್ಣ ಭಾಗಗಳು ಬೇಕಾದವರು ವಾಟ್ಸಪ್ ಮೂಲಕ ಸಂಪರ್ಕಿಸಿ.....
✍ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ
+918105745760
No comments:
Post a Comment