Saturday, 15 October 2016

ಸಯ್ಯಿದ್ ಮದನಿ ಖ.ಸಿ...ಭಾಗ -04

ಉಳ್ಳಾಲ ಬೆಳಗಿಸಿದ ಮಹಾ ಪುರುಷ ಖುತುಬುಝ್ಝಮಾನ್ ಸಯ್ಯಿದ್ ಮದನಿ ಖ.ಸಿ*

              ಭಾಗ - 04

*✍ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ*

ಕರಾಮತ್ -4
ಸಯ್ಯಿದ್ ಮದನಿ ತಂಗಳ್ ಖ.ಸಿ ರವರ ವಫಾತ್ ಸಮೀಪಿಸಿದಾಗ ತನ್ನ ಪ್ರಿಯ ಪತ್ನಿ ಯಾದ ಬೀವಿಯವರು ಉಮ್ಮಳಿಸಿ ಬರುವ ದುಃಖದೊಂದಿಗೆ ಕೇಳಿದರು.ಓ ನನ್ನ ಪ್ರಿಯ ಪತಿಯವರೇ....
ತಾವು ನನ್ನನ್ನು ಬಿಟ್ಟು ಹೋದರೆ ನನ್ನ ಗತಿಯೇನು? ನಾನು ವಿಧವೆಯಾದರೆ ನನ್ನ ದೈನಂದಿನ ಆವಶ್ಯಕತೆಗಳಿಗೆ ನಾನು ಏನು ಮಾಡಲಿ?ನನ್ನ ಜೀವನ ನಿರ್ವಹಣೆಗೆ ನಾನು ಏನು ಮಾಡಲಿ?
ಸಯ್ಯಿದರು ಹೇಳಿದರು.ನೀನು ದುಃಖಿಸಬೇಡ.ಸಹನಾಶೀಲಳಾಗು.
ಅಲ್ಲಾಹನ ಅನುಗ್ರಹದಿಂದ ನಿನ್ನ ದೈನಂದಿನ ಖರ್ಚು ನಿಭಾಯಿಸಲು ಬೇಕಾಗುವಷ್ಟು ಹಣ ನಿನಗೆ ಸಿಗಲಿದೆ.ನನ್ನ ಮರಣದ ಬಳಿಕ ಪ್ರತೀದಿನ ಬೆಳಿಗ್ಗೆ ನನ್ನ ಖಬರಿನ ಹಿಂಬದಿಯಲ್ಲಿ ನಿನಗೆ ದೈನಂದಿನ ಖರ್ಚಿಗೆ ಬೇಕಾಗುವಷ್ಟು ಹಣ ಸಿಗಲಿರುವುದು ಇಂಶಾ ಅಲ್ಲಾಹ್...
ಸಯ್ಯಿದರು ವಫಾತಾದರು.ಇನ್ನಾಲಿಲ್ಲಾಹ್...ಮಯ್ಯಿತ್ ಪರಿಪಾಲನೆ ಎಲ್ಲವೂ ಸುಸೂತ್ರವಾಗಿ ನಡೆಯಿತು.ಮರುದಿನ ಬೆಳಿಗ್ಗೆ ಬೀವಿಯವರು ತನ್ನ ಪ್ರಿಯ ಪತಿ ಮದನಿ ತಂಗಳರ ಖಬರ್ ಬಳಿ ಬಂದರು.....ಏನಾಶ್ಚರ್ಯ....ಮದನಿ ತಂಗಳ್ ರವರ ಅದ್ಭುತ ಕರಾಮತು ಪ್ರತ್ಯಕ್ಷವಾಯಿತು....ತನ್ನ ಅಂದಿನ ಜೀವನ ನಿರ್ವಹಣೆಗೆ ಒಂದು ರೂಪಾಯಿ ಹಣ ಖಬರ್ ಬಳಿ ಇತ್ತು..( 300 ವರ್ಷಗಳ ಹಿಂದಿನ ಚರಿತ್ರೆಯಾಗಿದೆ....ಅಂದಿನ ಒಂದು ರೂಪಾಯಿ ಇಂದಿನ ಎಷ್ಟು ರೂಪಾಯಿಗಳಿಗೆ ಸಮಾನವಾಗಬಹುದು ಎಂದು ನೀವೇ ಊಹಿಸಿ ನೋಡಿ ) ಹೀಗೆ ಪ್ರತಿನಿತ್ಯವೂ ಖರ್ಚಿಗೆ ಒಂದು ರೂಪಾಯಿ ಸಿಗುತ್ತಲಿತ್ತು....ಹೀಗಿರಲು ಒಂದು ದಿವಸ ಊರಿನ ತನ್ನ ಮನೆಯ ಹತ್ತಿರದ ಸ್ತ್ರೀ ಬೀವಿಯವರಲ್ಲಿ ಹೇಳಿದರು.ನಿನಗೆ ದೈನಂದಿನ ಸಿಗುವ ಒಂದು ರೂಪಾಯಿ ಪೂರ್ತಿ ಯಾಕೆ ಖರ್ಚು ಮಾಡುತ್ತಿರುವೆ.....ಅದರಲ್ಲಿ ಅರ್ಧ ರೂಪಾಯಿಯಷ್ಟು ಹಣ ತೆಗೆದಿಡು....ನಿನಗೆ ಯಾವಾಗಲಾದರೂ ಉಪಯೋಗಕ್ಕೆ ಬರಬಹುದು...( ಸ್ತ್ರೀಯರ ಬುದ್ಧಿ ಇಂದೂ ಅಂದೂ ಎಂದೆಂದೂ ವಕ್ರಬುದ್ಧಿ ಎಂಬುದಕ್ಕೆ ಇದೊಂದು ಸ್ಪಷ್ಟ ನಿದರ್ಶನವಾಗಿದೆ ) ತನ್ನ ಮನೆಯ ಹತ್ತಿರದ ಮಹಿಳೆಯ ಮಾತನ್ನು ಕೇಳಿ ಬೀವಿಯವರು ಅಂದು ಅರ್ಧದಷ್ಟು ರೂಪಾಯಿಯನ್ನು ಖರ್ಚು ಮಾಡಿ ಅರ್ಧದಷ್ಟನ್ನು ತೆಗೆದಿರಿಸಿದರು...ಮರುದಿನ ಬೀವಿಯವರು ಖಬರ್ ಬಳಿ ಸಾಗಿ ನೋಡಿದಾಗ ಅರ್ಧ ರೂಪಾಯಿಯಷ್ಟು ಹಣ ಮಾತ್ರ ಕಂಡು ಅವಕ್ಕಾದರು.ನೆರೆಮನೆ ಸ್ತ್ರೀಯ ಮಾತಿಗೆ ಶರಣಾಗಿ ಮುಂದೆ ಪ್ರತಿನಿತ್ಯವೂ ಖಬರ್ ಬಳಿ ಅರ್ಧ ರೂಪಾಯಿಯೇ ಬೀವಿಗೆ ಸಿಗುವಂತಾಯಿತು...ಈ ಒಂದು ಕರಾಮತು ಇಂದು ನಾವೂ ಪ್ರತ್ಯಕ್ಷವಾಗಿ ಕಾಣುತ್ತಿದ್ದೇವೆ...ಸಯ್ಯಿದ್ ಮದನಿ ತಂಗಳ್ ಖ.ಸಿ ರವರ ದರ್ಬಾರಿನ ಮೂಲಕವೇ ಎಷ್ಟೋ ಮಸೀದಿ ಮದ್ರಸ ಶಿಕ್ಷಣ ಸಂಸ್ಥೆಗಳು ನಡೆಯುತ್ತಿವೆ.ಇವೆಲ್ಲದರ ಖರ್ಚು ವೆಚ್ಚಗಳಿಗೆ ಬೇಕಾಗುವಷ್ಟು ಸಾವಿರಾರು  ರೂಪಾಯಿಗಳು ಮದನಿ ತಂಗಳ್ ಖ.ಸಿ ರವರ ಕರಾಮತ್ ಮೂಲಕವೇ ಹರಿದು ಬರುತಿದೆ..

*ಕರಾಮತ್ -05*

ಒಂದು ದಿನ ಮದನಿ ತಂಗಳ್ ಖ.ಸಿ ಉಳ್ಳಾಲದ ಅಳೇಕಲ ಮಸೀದಿ ಸಮೀಪವಿರುವ ಕೊಲವೊಂದರಲ್ಲಿ ನಮಾಝ್ ಗಾಗಿ ವುಲೂ ನಿರ್ವಹಿಸುತ್ತಿದ್ದರು.ವುಲೂವಿನ ಮಧ್ಯೆ ಒಂದೇ ಸಮನೆ ತನ್ನ ಎರಡು ಕೈಗಳಿಂದ ನೀರನ್ನೆತ್ತಿ ಮೇಲಕ್ಕೇ ಚಿಮ್ಮುತ್ತಲಿದ್ದರು...ಸನಿಹವಿದ್ದವರು ಮೂಕ ಪ್ರೇಕ್ಷಕರಾಗಿ ನೋಡುತ್ತಿದ್ದರು..ನೀರು ಚಿಮ್ಮಿಸುವುದನ್ನು ನಿಲ್ಲಿಸಿದಾಗ ಸನಿಹವಿದ್ದವರು ಆಶ್ಚರ್ಯಚಕಿತರಾಗಿ ಕೇಳಿದರು...ಮದನಿ ತಂಗಳರೇ..ತಾವು ಯಾಕೆ ವುಲೂವಿನ ಮಧ್ಯೆ ನೀರನ್ನು ಮೇಲಕ್ಕೆ ಚಿಮ್ಮಿಸಿದಿರಿ....ಮದನಿ ತಂಗಳ್ ಹೇಳಿದರು.ನಾನು ವುಲೂ ನಿರ್ವಹಿಸುತ್ತಿರುವುದರ ಮಧ್ಯೆ ಪವಿತ್ರ ಮಕ್ಕಾದ ಹರಂ ಶರೀಫ್ ನಲ್ಲಿ ಬೆಂಕಿ ಅನಾಹುತ ಸಂಭವಿಸುವುದನ್ನು ಕಂಡೆ.ಅಲ್ಲಾಹನ ಆಜ್ಞೆಯಂತೆ ಅದನ್ನು  ನಂದಿಸಲು ನೀರನ್ನು ಚಿಮ್ಮಿಸಿದೆ..ಅಲ್ಲಾಹನ ಅನುಗ್ರಹದಿಂದ ಬೆಂಕಿ ನಂದಿತು....ಎಂದರು....ಸಯ್ಯಿದ್ ಮದನಿ ತಂಗಳ್ ರವರ ಅದ್ಬುತದಿಂದ  ಜನರು ಭಾರೀ ಅನಾಹುತದಿಂದ ರಕ್ಷೆ ಪಡೆದರು.ಆ ವರ್ಷ ಪವಿತ್ರ ಹಜ್ ಗೆ ಹೋದ ಊರಿನ ಕೆಲ ಹಜ್ಜಾಜ್ ಗಳು ಮರಳಿ ಬಂದು ಅಲ್ಲಿ ನಡೆದ ಸಂಗತಿಯನ್ನು ವಿವರಿಸಿದ್ದು ಹೀಗೆ...ಮಕ್ಕಾದಲ್ಲಿ ಭಾರೀ ಬೆಂಕಿ ಅನಾಹುತ ಸಂಭವಿಸುತ್ತಿತ್ತು.ನಾವು ಸಯ್ಯಿದ್ ಮದನಿ ತಂಗಳ್ ರವರನ್ನು ತವಸ್ಸುಲ್ ಮಾಡಿ ಅಲ್ಲಾಹನಲ್ಲಿ ಬೇಡಿದೆವು....ಅಷ್ಟರಲ್ಲಿ ಮೇಲಿನಿಂದ ನೀರು ಎಸೆಯಲ್ಪಟ್ಟು ಬೆಂಕಿ ನಂದಿತು..ಭಾರೀ ಅನಾಹುತ ಸಂಭವಿಸುವುದು ತಪ್ಪಿತು..

*ಮುಂದುವರಿಯುವುದು*

✍ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ
+918105745760

No comments:

Post a Comment

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿ...