Saturday, 15 October 2016

ನಮಾಜು ನಿರ್ವಹಿಸಲು ಅಸಡ್ಡೆ ತೋರಿಸುವವರೇ.ತಮಗಿದೆ 14 ಶಿಕ್ಷೆಗಳು

ಐದು ವಕ್ತ್ ನಮಾಜು ನಿರ್ವಹಿಸಲು ಅಸಡ್ಡೆ ತೋರಿಸುವವರೇ.....
ತಮಗಿದೆ 14 ಶಿಕ್ಷೆಗಳು...

✍ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ...

*ಖಾತಿಮತುಲ್ ಮುಹಖ್ಖಿಖೀನ್ ಅಹ್ಮದುಬ್ನು ಹಜರುಲ್ ಹೈತಮಿ (ರ.ಅ) ರವರ ಕಿತಾಬುಝ್ಝವಾಜಿರ್ ನಲ್ಲಿ ಕಾಣಬಹುದು*

ಪವಿತ್ರ ಹದೀಸಿನಲ್ಲಿ ವರದಿಯಾಗಿದೆ...

ಯಾರಾದರೂ ಐದು ವಖ್ತ್ ನಮಾಜನ್ನು ಕ್ರತ್ಯ ಸಮಯದಲ್ಲಿ ನಿರ್ವಹಿಸಿದರೆ ಅಲ್ಲಾಹು ಅವನಿಗೆ ಐದು ಕಾರ್ಯಗಳನ್ನು ನೀಡಿ ಗೌರವಿಸುತ್ತಾನೆ...
೧-ಬದುಕಿನಲ್ಲಿ ಸಾಮಾನ್ಯವಾಗಿ ಬಂದೆರಗುವ ಕಷ್ಟಕಾರ್ಪಣ್ಯಗಳು ಇಲ್ಲವಾಗುತ್ತದೆ.
೨-ಖಬರ್ ಶಿಕ್ಷೆಯಿಂದ ರಕ್ಷೆ ಲಭಿಸುವಿಕೆ.
೩-ನಾಳೆ ಪಾರತ್ರಿಕ ಲೋಕದಲ್ಲಿ ಬಲಗೈಯ್ಯಲ್ಲಿ ಕಿತಾಬ್ ಲಭಿಸುವ ಸಜ್ಜನರ ಕೂಟದಲ್ಲಿ ಸೇರುವಿಕೆ.
೪-ಪಾರತ್ರಿಕ ಲೋಕದಲ್ಲಿ ಸ್ವಿರಾತ್ ಸೇತುವೆಯನ್ನು ಅಲ್ಲಾಹನ ಅತಿ ಹತ್ತಿರದ ಇಷ್ಟದಾಸರುಗಳು ಮಿಂಚಿನ ವೇಗದಲ್ಲಿ ಹಾದುಹೋಗುತ್ತಾರೆ.ಆ ಸೌಭಾಗ್ಯ ಲಭಿಸುವಿಕೆ.
೫-ಯಾವುದೇ ವಿಚಾರಣೆ ಇಲ್ಲದೆ ಸ್ವರ್ಗ ಪ್ರವೇಶ ಪಡೆಯುವಿಕೆ.

ನಮಾಜಿನ ವಿಷಯದಲ್ಲಿ ಅಸಡ್ಡೆ ಅಶ್ರದ್ಧೆ ತೋರಿಸುವವರನ್ನು ಅಲ್ಲಾಹು 14 ಶಿಕ್ಷೆಗಳಿಗೆ ಗುರಿಪಡಿಸುತ್ತಾನೆ.ಇಹಲೋಕದಲ್ಲಿ 5 ಶಿಕ್ಷೆಗಳು,ಮರಣದ ವೇಳೆ 3 ಶಿಕ್ಷೆಗಳು,ಖಬರ್ ನಲ್ಲಿ 3 ಶಿಕ್ಷೆಗಳು ಹಾಗೂ ಮಹಶರಾದಲ್ಲಿ 3 ಶಿಕ್ಷೆಗಳು.

*ನಮಾಜು ಕ್ರತ್ಯ ಸಮಯದಲ್ಲಿ ನಿರ್ವಹಿಸದೇ ಅಸಡ್ಡೆ ಅಶ್ರದ್ಧೆ ತೋರಿಸುವವರಿಗೆ ದುನ್ಯಾವಿನಲ್ಲಿ ಅಲ್ಲಾಹು ನೀಡುವ ಐದು ಶಿಕ್ಷೆಗಳು.*

೧-ಅವನ ಜೀವನದಲ್ಲಿ ಬರಕತ್ ಇಲ್ಲವಾಗುವುದು.
೨-ಸಜ್ಜನರಿಗಿರುವ ಲಕ್ಷಣ ಅವನ ಮುಖದಿಂದ ಮಾಸಲ್ಪಡುವುದು.
೩-ಅವನು ನಿರ್ವಹಿಸುವ ಯಾವುದೇ ಸತ್ಕರ್ಮಕ್ಕೂ ಅಲ್ಲಾಹು ಪ್ರತಿಫಲ ನೀಡುವುದಿಲ್ಲ.
೪-ಅವನ ಪ್ರಾರ್ಥನೆ ಸ್ವೀಕರಿಸಲ್ಪಡುವುದಿಲ್ಲ.
೪-ಸಜ್ಜನರು ನಡೆಸುವ ಪ್ರಾರ್ಥನೆಯಲ್ಲಿ ಇವನಿಗೆ ಯಾವ ಅಂಶವೂ ಇಲ್ಲ.

*ಮರಣದ ವೇಳೆ ಅಲ್ಲಾಹು ನೀಡುವ ಮೂರು ಶಿಕ್ಷೆಗಳು*

೧-ಅವಮಾನಿತನಾಗಿ ಮರಣಹೊಂದುವನು.
೨-ಹಸಿದವನಾಗಿ ಮರಣಹೊಂದುವನು
೩-ಬಾಯಾರಿಕೆ ಇರುವವನಾಗಿ ಮರಣಹೊಂದುವನು.ಸಮುದ್ರದಷ್ಟು ನೀರು ಕೊಟ್ಟರೂ ಅವನ ಬಾಯಾರಿಕೆ ಕಡಿಮೆಯಾಗದು.

*ಖಬರ್ ನಲ್ಲಿ ಅಲ್ಲಾಹು ನೀಡುವ ಮೂರು ಶಿಕ್ಷೆಗಳು*

೧-ಅವನ ಎಲುಬುಗಳು ಪುಡಿಯಾಗುವಂತೆ ಖಬರ್ ಇಕ್ಕಟ್ಟಾಗುತ್ತದೆ.
೨-ಅವನ ಖಬರ್ ಅಗ್ನಿಕುಂಡವಾಗಲಿದೆ.ಅದರಲ್ಲಿ ರಾತ್ರಿ ಹಗಲು ಸದಾ ಸಮಯ ಶಿಕ್ಷಿಸಲ್ಪಡುತ್ತಾನೆ.
೩-ಶುಜಾಉಲ್ ಅಖ್ರಾ ಎಂಬ ಭಯಾನಕ ಸರ್ಪ ಅವನ ಖಬರ್ ನಲ್ಲಿ ಪ್ರತ್ಯಕ್ಷವಾಗುತ್ತದೆ.ಬೆಂಕಿಯಿಂದ ಸ್ರಷ್ಟಿಸಲ್ಪಟ್ಟ ಅದರ ಎರಡು ಕಣ್ಣುಗಳು,ಉದ್ದುದ್ದವಾದ ಕಬ್ಬಿಣದ ಉಗುರುಗಳು.ಅದು ನಮಾಜಿನ ವಿಷಯದಲ್ಲಿ ಅಶ್ರದ್ಧೆ ತೋರಿಸಿದವನೊಂದಿಗೆ ಹೇಳುತ್ತದೆ.
ಓ ಮನುಷ್ಯ : ನಾನು ಯಾರೂಂತ ನಿನಗೆ ತಿಳಿಯಿತಾ? ನನ್ನ ಹೆಸರು ಶುಜಾಉಲ್ ಅಖ್ರಾ. ಅದರ ಶಬ್ದ ಕೇಳಿ ಅವನು ಬೆಚ್ಚಿಬೀಳ್ತಾನೆ.ಸಿಡಿಲಿನ ಆರ್ಭಟದಂತಿರುವ ಅದರ ಶಬ್ದ.ಅದು ಹೇಳುತ್ತದೆ.ನೀನು ಸುಬಹ್ ನಮಾಜು ನಿರ್ವಹಿಸಲು ಅಸಡ್ಡೆ ತೋರಿಸಿದ ನಿಮಿತ್ತ ಸೂರ್ಯೋದಯದವರೆಗೂ ಲುಹರ್ ನಮಾಜು ನಿರ್ವಹಿಸಲು ಅಶ್ರದ್ಧನಾದ ಕಾರಣ ಅಸರ್ ವರೆಗೂ ಅಸರ್ ನಮಾಜು ನಷ್ಟಪಡಿಸಿದ ಕಾರಣ ಮಗ್ರಿಬ್ ತನಕವೂ ಮಗ್ರಿಬ್ ನಮಾಜು ಸಮಯಕ್ಕೆ ಸರಿಯಾಗಿ ನಿರ್ವಹಿಸದೆ ಅಸಡ್ಡೆ ತೋರಿಸಿದ ಕಾರಣ ಇಶಾ ವರೆಗೂ ಇಶಾ ನಮಾಜು ನಷ್ಟಪಡಿಸಿದ ನಿಮಿತ್ತ ಸುಬಹ್ ತನಕವೂ ನಿನ್ನನ್ನು ದಂಡಿಸಲು ಅಲ್ಲಾಹನ ಆಜ್ಞೆ ಇದೆ.
ನಿನ್ನನ್ನು ಶಿಕ್ಷಿಸಲು ಅಲ್ಲಾಹು ನನಗೆ ಆದೇಶಿಸಿದ್ದಾನೆ.
ಹೀಗೆ ಹೇಳುತ್ತಾ ಶುಜಾಉಲ್ ಅಖ್ರಾ ಎಂಬ ಘಟಸರ್ಪವು ಅವನನ್ನು ದಂಡಿಸಲು ಶುರುಮಾಡುತ್ತದೆ.ಅದರ ಒಂದೊಂದು ಹೊಡೆತವೂ ಭೀಕರವಾದುದಾಗಿದೆ.ಅದರ ಒಂದು ಹೊಡೆತದಿಂದ ಆತ 70 ಮೊಲಗಳಷ್ಟು ಭೂಮಿಯ ಅಡಿಗೆ ಹುದುಗಿ ಹೋಗುತ್ತಾನೆ.ಹೀಗೆ ಅಂತ್ಯದಿನದವರೆಗೂ ಆತ ಖಬರ್ ನಲ್ಲಿ ನರಕಸದ್ರಶ ಭೀಕರ ಶಿಕ್ಷೆಯನ್ನು ಅನುಭವಿಸುತ್ತಿರುತ್ತಾನೆ.

*ಖಬರ್ ನಿಂದ ಹೊರಟು ಮಹಶರಾದಲ್ಲಿ ಅನುಭವಿಸುವ ಮೂರು ಶಿಕ್ಷೆಗಳು*

೧-ಮಹಶರಾದಲ್ಲಿ ಕಠಿಣ ವಿಚಾರಣೆಗೆ ಗುರಿಯಾಗುತ್ತಾನೆ.
೨-ಅಲ್ಲಾಹನ ಕ್ರೋಧಕ್ಕೆ ತುತ್ತಾಗುವನು
೩-ಕೊನೆಗೆ ಭಯಾನಕ ನರಕಾಗ್ನಿಗೆ ಪ್ರವೇಶಿಸುತ್ತಾನೆ.

✍ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ

No comments:

Post a Comment

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿ...