Saturday, 15 October 2016

ಇಸ್ಲಾಂ ಕ್ರಷಿಗೆ ನೀಡಿದ ಪ್ರಾಮುಖ್ಯತೆ

*ಇಸ್ಲಾಂ ಕ್ರಷಿಗೆ ನೀಡಿದ ಮಹತ್ವ*

      ಮರ ಗಿಡದ ಮೂಲಕ ಪ್ರತಿಫಲ

✍ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ

********************************

ಕ್ರಷಿಗೆ ಇಸ್ಲಾಮಿನಲ್ಲಿ ಅಪಾರವಾದ ಪ್ರಾಧಾನ್ಯತೆಯನ್ನು ನೀಡಲಾಗಿದೆ.ಪವಿತ್ರ ಕುರಾನಿನಲ್ಲಿ ಕ್ರಷಿಗೆ ಸಂಬಂಧಿಸಿದ ಅನೇಕ ಸೂಕ್ತಗಳನ್ನು ಕಾಣಬಹುದು.ನೆಬಿ ಸ.ಅ ಮರ ಹದೀಸಿನಲ್ಲಿಯೂ ಇದರ ಮಹತ್ವವನ್ನು ತಿಳಿಸುವ ಅನೇಕ ವರದಿಗಳಿವೆ.

ಅಲ್ಲಾಹನು ಪವಿತ್ರ ಕುರಾನಿನ ಯಾಸೀನ್ ಅಧ್ಯಾಯದಲ್ಲಿ ಹೇಳುತ್ತಾನೆ.

*وءاية لهم الأرض الميتة أحيينها وأخرجنا منهاحبا فمنه يأكلون.وجعلنا فيها جنات من نخيل وأعناب وفجرنا فيها من العيون.ليأكلو من ثمره وما عملته أيديهم أفلا يشكرون*

ಅವರಿಗೊಂದು ದ್ರಷ್ಟಾಂತವಿದೆ.ನಿರ್ಜೀವ ಭೂಮಿಯನ್ನು ನಾವು ಜೀವಂತಿಕೆಗೊಳಿಸಿದೆವು ಮತ್ತು ಅದರಿಂದ ನಾವು ಧಾನ್ಯಗಳನ್ನು ಉತ್ಪಾದಿಸಿದೆವು.ಅದರಿಂದಾಗಿದೆ ಅವರು ಭಕ್ಷಿಸುತ್ತಿರುವುದು.ಖರ್ಜೂರ ಮತ್ತು ದ್ರಾಕ್ಷೆಯ ತೋಟಗಳನ್ನು ಅದರಲ್ಲಿ ನಾವು ಮಾಡಿದೆವು.ಹಾಗು ಅದರಲ್ಲಿ ನಾವು ನೀರಿನ ಒರತೆಗಳನ್ನು ಹರಿಸಿದೆವು.ಅದರ ಫಸಲುಗಳಿಂದ ಮತ್ತು ಅವರ ಕೈಗಳು ಕಷ್ಟಪಟ್ಟು ಉಂಟು ಮಾಡಿದುದರಿಂದಲೂ ಅವರು ಭಕ್ಷಿಸುವ ಸಲುವಾಗಿ.ಹಾಗಾಗಿಯೂ ಅವರು ಕ್ರತಜ್ಞತೆ ಸಲ್ಲಿಸುವುದಿಲ್ಲವೇ?

ಪ್ರವಾದಿ (ಸ.ಅ) ಹೇಳುತ್ತಾರೆ.

لا يغرس مسلم غرسا ولا يزرع زرعا فيأكل منه إنسان ولا دابة ولا شيئ إلا كان له صدقة.
وفي رواية - وما سرق منه له صدقة..

ಒಬ್ಬ ಮುಸ್ಲಿಮನು ಒಂದು ಗಿಡ ನೆಡುವುದಿಲ್ಲ,ಅದೇ ರೀತಿ ಆತ ಕ್ರಷಿ ಮಾಡುವುದಿಲ್ಲ.ಮತ್ತು ಅದರಿಂದ ಮನುಷ್ಯರು,ಮ್ರಗಗಳು,ಅಥವಾ ಯಾವುದೇ ಜೀವಿಯೂ ತಿನ್ನುವುದಿಲ್ಲ.ಆ ತಿಂದಂತಹ ವಸ್ತು ಗಿಡ ನೆಟ್ಟವನಿಗೆ ಮತ್ತು ಕ್ರಷಿ ಮಾಡಿದವನಿಗೆ ಸ್ವದಕ ಆಗಿ ಅಲ್ಲದೆ.
*ಮತ್ತೊಂದು ಹದೀಸಿನಲ್ಲಿ ವರದಿಯಾಗಿದೆ.*
ಯಾರಾದರೂ ಅದರಿಂದ ಕಳವುಗೈದು ತಿನ್ನುವುದೂ ಇಲ್ಲ.ಅದು ಕೂಡಾ ನೆಟ್ಟವನಿಗೆ ಮತ್ತು ಕ್ರಷಿ ಮಾಡಿದವನಿಗೆ ಸ್ವದಕ ಆಗಿ ಅಲ್ಲದೆ...

ಗಿಡ ನೆಡುವುದರ ಮತ್ತು ಕ್ರಷಿಯ ಶ್ರೇಷ್ಟತೆಯನ್ನು ತಿಳಿಸುವ ಇಂತಹ ಹಲವಾರು ಹದೀಸುಗಳು ವರದಿಯಾಗಿದೆ.ನೆಡಲ್ಪಟ್ಟ ಗಿಡ ಮುಂದೆ ಮರವಾಗಿ ಅದರಿಂದ ಹಾಗೂ ಕ್ರಷಿ ಮಾಡಲ್ಪಟ್ಟ ಕ್ರಷಿಯಿಂದ ಮನುಷ್ಯ,ಪ್ರಾಣಿ ಪಕ್ಷಿಗಳು,ಹಕ್ಕಿಗಳು,ಜಂತುಗಳು ಹೀಗೆ ಯಾರೆಲ್ಲಾ ಪ್ರಯೋಜನ ಪಡೆಯುತ್ತಿರುತ್ತಾರೋ ಆವಾಗಲೆಲ್ಲಾ ಗಿಡ ನೆಟ್ಟು ಪೋಷಿಸಿ ಬೆಳೆಸಿದವನಿಗೆ ಮತ್ತು  ಕ್ರಷಿ ಮಾಡಿದವನಿಗೆ ಪ್ರತಿಫಲ ಲಭಿಸುತ್ತಲೇ ಇರುತ್ತದೆ.
ಪ್ರವಾದಿ (ಸ.ಅ) ಮತ್ತೊಂದು ಹದೀಸಿನಲ್ಲಿ ಹೇಳಿದ್ದನ್ನು ಕಾಣಬಹುದು.

ಒಬ್ಬಾತ ಒಂದು ಗಿಡವನ್ನು ನೆಟ್ಟು ಬೆಳೆಸಿ ಪೋಷಿಸಿದರೆ ಅದರಿಂದ ಸಿಗುವ ಫಸಲು ಅನುಸರಿಸಿ ಅವನಿಗೆ ಪ್ರತಿಫಲ ಸಿಗುವುದು.

ಒಟ್ಟಿನಲ್ಲಿ ಹೇಳುವುದಾದರೆ ಒಬ್ಬ ಮುಸ್ಲಿಂ ಒಂದು ಸಸಿಯನ್ನು ನೆಟ್ಟು ಕಷ್ಟಪಟ್ಟು ಬೆಳೆಸಿ ಅದರಿಂದ ಸಿಗುವ ಫಲಗಳು,ಹಣ್ಣು ಹಂಪಲುಗಳು,ಕಾಯಿಗಳಿಂದ ಯಾರೆಲ್ಲಾ ಪ್ರಯೋಜನ ಪಡೆಯುತ್ತಿರುತ್ತಾರೋ ಆಗ ಅದು ಅವನಿಗೆ ಸ್ವದಕ ಆಗಿ ಮಾರ್ಪಡುತ್ತದೆ.ಅವನು ಜೀವಿಸಿರಲಿ ಅಥವಾ ಮರಣಹೊಂದಿರಲಿ ಅವನಿಗೆ ಪ್ರತಿಫಲ ಲಭಿಸುತ್ತಿರುತ್ತದೆ.
        ಕ್ರಷಿಯು ಅತ್ಯುತ್ತಮ ಕೆಲಸವಾಗಿದೆ.ಎರಡನೇ ಸ್ಥಾನ ಕೈಗಾರಿಕೆಯಾಗಿದೆ.ಬಳಿಕ ವ್ಯಾಪಾರವಾಗಿದೆ.ಯಾವುದೇ ಕಾರಣವಿಲ್ಲದೆ ಮರ ಕಡಿಯುವುದು,ರಾತ್ರಿ ಫಸಲು ತೆಗೆಯುವುದು,ಕ್ರಷಿಗೆ ನೀರು ಬಿಡದೇ ಇರುವುದು ಕರಾಹತ್ ಆಗಿದೆ.ಭೂಮಿಯಿರುವವನು ಅದರಲ್ಲಿ ಕ್ರಷಿ ಮಾಡಬೇಕು,ಅಥವಾ ಭೂಮಿಯನ್ನು ಬೇರೆಯವರಿಗೆ ಕ್ರಷಿ ಮಾಡಲು ನೀಡಬೇಕು,ಕ್ರಷಿ ಮಾಡಲು ಯೋಗ್ಯವಾದ ಭೂಮಿಯಿದ್ದೂ ಅದನ್ನು ಹಾಗೆಯೇ ಖಾಲಿ ಬಿಡುವುದು ಒಳ್ಳೆಯದಲ್ಲ.

*ಕ್ರಷಿ ಮಾಡುವುದರಿಂದ ಸಿಗುವ ಪ್ರಯೋಜನಗಳು*

೧-ಭೂಮಿ ಹಸನುಗೊಳಿಸುವಿಕೆ
೨-ಕ್ರಷಿಯಿಂದ ತಿನ್ನಲ್ಪಟ್ಟದ್ದರ ಅಥವಾ ಕಳವುಗೈಯ್ಯಲ್ಪಟ್ಟದ್ದರ ಪ್ರತಿಫಲ ಲಭಿಸುವಿಕೆ
೩-ಸಸಿ,ಮರಗಿಡಗಳು ತಸ್ಬೀಹ್ ಹೇಳಿದುದರ ಪ್ರತಿಫಲ ಲಭಿಸುವಿಕೆ
೪-ಮರ ನಾಶವಾಗಿ ಹೋಗುವ ತನಕ ಅದರಲ್ಲಿ ಸಿಗುವ ಫಸಲುಗಳು,ಹಣ್ಣುಹಂಪಲು,ಕಾಯಿಗಳ ಲೆಕ್ಕ ಅನುಸರಿಸಿ ಪ್ರತಿಫಲ ಲಭಿಸುವಿಕೆ
೫-ಆಹಾರ ಧವಸ ಧಾನ್ಯಗಳು ಕಾಲಕ್ಕನುಗುಣವಾಗಿ ಸರಿಯಾದ ರೀತಿಯಲ್ಲಿ ಪೂರೈಕೆಯಾಗುವಿಕೆ
೬-ಕೆಲಸಗಳಲ್ಲಿ ಅತ್ಯುತ್ತಮ ಕೆಲಸದಲ್ಲಿ ಭಾಗಿಯಾದುದರ ಮನ ಸಂತ್ರಪ್ತಿ ಲಭಿಸುವಿಕೆ
೭-ಮರ ಗಿಡಗಳು,ಫಸಲುಗಳು,ಹಣ್ಣು ಹಂಪಲುಗಳನ್ನು ದರ್ಶಿಸಿ  ಪ್ರಕ್ರತಿ ಸೌಂದರ್ಯವನ್ನು ಆಸ್ವಾದಿಸುವ ಮೂಲಕ ಮನ ಸಂತ್ರಪ್ತಿ ಲಭಿಸುವಿಕೆ.
೮-ಕ್ರಷಿ,ಮರದಿಂದ ಸಿಗುವ ಫಸಲುಗಳಿಂದ ಮರಣದ ಬಳಿಕವೂ ಅದರ ಪ್ರತಿಫಲ ಲಭಿಸುವಿಕೆ

No comments:

Post a Comment

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿ...